ದಾದಾ ಈಸ್ ಬ್ಯಾಕ್‌ನಿಂದ ಮತ್ತೊಂದು ಟ್ರೈಲರ್!

ಈ ಹಿಂದೆ ಗೊಂಬೆಗಳ ಲವ್ ತ್ರದ ಮೂಲಕ ಗಮನಸೆಳೆದಿದ್ದ ನಿರ್ದೇಶಕ ಸಂತೋಷ್ ಅವರ ಹೊಸ ಚಿತ್ರ ದಾದಾ ಈಸ್ ಬ್ಯಾಕ್ ಆರಂಭದ ಚಿತ್ರದಲ್ಲಿಯೇ ಒಂದಷ್ಟು ಕ್ರಿಯಾಶೀಲ ಪ್ರಯತ್ನ ಮಾಡಿದ್ದ ಸಂತೋಷ್ ಇದೀಗ ಟ್ರೈಲರ್ ಬಿಡುಗಡೆಯ ಬಗ್ಗೆಯೇ ಒಂದು ಟ್ರೈಲರ್ ಬಿಟ್ಟು ಹವಾ ಎಬ್ಬಿಸಿದ್ದಾರೆ!

 ಭಾರೀ ವೇಗದಿಂದ ಚಿತ್ರೀಕರಣ ಪೂರೈಸಿಕೊಳ್ಳುತ್ತಿರುವ ಈ ಚಿತ್ರದ ಟ್ರೈಲರ್ ರೆಡಿಯಾಗಿದೆ. ಈ ಟ್ರೈಲರ್ ಬಿಡುಗಡೆಯಾಗುವ ದಿನಾಂಕವನ್ನು ಡಿಫರೆಂಟಾಗಿ ಹೇಳಬೇಕೆಂಬ ಇರಾದೆಯಿಂದ ನಿರ್ದೇಶಕರು ಅದಕ್ಕಾಗಿಯೇ ಚೆಂದದೊಂದು ಟ್ರೈಲರ್‌ನ್ನು ಯೂಟ್ಯೂಬಲ್ಲಿ ಹರಿಯಬಿಟ್ಟಿದ್ದಾರೆ. ಈ ಟ್ರೈಲರ್ ಮೂಲಕವೇ ಹನುಮಂತ ದೇವರ ಮೂಲಕ ಟ್ರೈಲರ್ ಡೇಟ್ ಅನೌನ್ಸ್ ಮಾಡಿಸಿರೋದು ಮತ್ತೊಂದು ವಿಶೇಷ!

ಈ ಆಧಾರದಲ್ಲಿ ಹೇಳೋದಾದರೆ ಏಪ್ರಿಲ್ ಒಂದನೇ ತಾರೀಕಿನಂದು ದಾದಾ ಈಸ್ ಬ್ಯಾಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಆರಂಭದ ಚಿತ್ರದಲ್ಲಿ ನವಿರು ನಿರೂಪಣೆಯ ಮೂಲಕ ಮೋಡಿ ಮಾಡಿದ್ದ ಸಂತೋಷ್ ಅವರು ಈ ಚಿತ್ರದಲ್ಲಿ ಪಕ್ಕಾ ಮಾಸ್ ಸಬ್ಜೆಕ್ಟ್ ಒಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಚಿತ್ರದಲ್ಲಿಯೂ ಗೊಂಬೆಗಳ ಲವ್ ಚಿತ್ರದಲ್ಲಿ ನಾಯಕರಾಗಿದ್ದ ಅರುಣ್ ನಾಯಕರಾಗಿದ್ದಾರೆ. ಶ್ರಾವ್ಯ ನಾಯಕಿ. ಖ್ಯಾತ ತಮಿಳು ನಟ ಪಾರ್ಥಿಬನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ, ಶರತ್ ಲೋಹಿತಾಶ್ವ, ಮುಂತಾದವರ ಅದ್ದೂರಿ ತಾರಾಗಣ ಈ ಚಿತ್ರಕ್ಕಿದೆ. 

ಆಪಲ್ ಫ಼ಿಲಂಸ್ ಮತ್ತು ದಯಾನಂದ್ ಸೌಂಡ್ಸ್ ಲಾಂಛನದಲ್ಲಿ ಅಜಯ್ ರಾಜ್ ಅರಸ್ ಮತ್ತು ಡಾ. ಆರ್.ಶಂಕರ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಕ್ಷಯ್ ಪಿ ರಾವ್ ಅವರ ಸಂಕಲನವಿದೆ. ಒಟ್ಟಾರೆ ಒಂದಷ್ಟು ನಿರೀಕ್ಷೆಯನ್ನು ಈ ಚಿತ್ರದ ಹುಟ್ಟು ಹಾಕಿದೆ. 

ಕಿರಿಕ್‌ಪಾರ್ಟಿ ಯಶಸ್ಸಲ್ಲಿ ರಶ್ಮಿಕಾಮಂದಣ್ಣ
ಕಿರಿಕ್‌ಪಾರ್ಟಿ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಈಗ ಖುಷಿಯಾಗಿದ್ದಾರೆ. ಆಕಸ್ಮಿಕವಾಗಿ ಚಿತ್ರರಂಗಕ್ಕೆ ಕಾಲಿಟ್ಟು, ಮಾಡಿದ ಮೊದಲ ಚಿತ್ರವೇ ಯಶಸ್ಸಾಗಿರುವುದು ಅವರ ಸಂತಸಕ್ಕೆ ಕಾರಣವಾಗಿದೆ.
  ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿಯ, ನಂದಾ ವೃತ್ತದಲ್ಲಿ ನೂತನವಾಗಿ ಪ್ರಾರಂಭವಾದ ನಕ್ಷತ್ರ ಕಲೆಕ್ಷನ್ಸ್ ಅತಿದೊಡ್ಡ ಉಡುಪುಗಳ ಷೋರೂಂ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಜನತೆ ಸೇರಿದಂತೆ ರಾಜ್ಯದ ಜನರು ಕಿರಿಕ್ ಪಾರ್ಟಿ ಚಿತ್ರಕ್ಕೆ ಉತ್ತಮ ಪೋತ್ಸಾಹ ನೀಡಿದ್ದರಿಂದ
ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವುದಲ್ಲದೆ, ಈಗಾಗಲೇ ಶೇ. ೭೫ರಷ್ಟು ಕಲೆಕ್ಷನ್ಸ್ ಬಂದಿದೆ. ಎಂದರು.
ಕಿರಿಕ್‌ಪಾರ್ಟಿ ಯಶಸ್ವಿಯಾದ ಹಿನ್ನಲೆಯಲ್ಲಿ ಅವಕಾಶಗಳು ಅರಸಿ ಬರುತ್ತಿರುವ ಬಗ್ಗೆ ಹೇಳಿದ ಅವರು, ಅಂಜಲಿ ಪುತ್ರ ಚಿತ್ರಕ್ಕೆ ಅವಕಾಶ ಸಿಕ್ಕಿದನ್ನು ಬಿಚ್ಚಿಟ್ಟರಲ್ಲದೆ, ಈಗಾಗಲೇ ಚಿತ್ರೀಕರಣ ನಡೆಯುತ್ತಿರುವ ಬಗ್ಗೆಯೂ ಹೇಳಿದರು.
ಅಂಜಲಿ ಪುತ್ರ ಚಿತ್ರದ ಜೊತೆಗೆ ಚಮಕ್ ಚಿತ್ರಕ್ಕೂ  ಒಪ್ಪಿಗೆ ನೀಡಿದ್ದು, ಮುಂದಿನ ತಿಂಗಳಲ್ಲಿ ಅದರ  ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದರು. ಆ ಪಾತ್ರ, ಈ ಪಾತ್ರ ಎನ್ನದೆ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸುವ ಬಯಕೆಯನ್ನು ಹೊರಗೆಡವಿದರು.
ಕೊಡಗಿನ ಬೆಡಗಿಯಾಗಿರುವ ರಶ್ಮಿಕಾ ಮಂದಣ್ಣ ಅವರಿಗೆ ನಟಿಸಿದ ಮೊದಲ ಚಿತ್ರವೇ ಬ್ರೇಕ್ ನೀಡಿದೆ. ಹೀಗಾಗಿ ಅವಕಾಶಗಳು ಅರಸಿಕೊಂಡು ಬರುತ್ತಿವೆ. ಆದರೆ ಅವರು ನಟಿಸುವ ಚಿತ್ರಗಳು ಮುಂದಿನ ದಿನಗಳಲ್ಲಿ ಯಶಸ್ಸು ತಂದುಕೊಡುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.  

ಬಾಲಿವುಡ್ ರಿಲೇಷನ್ ಶಿಪ್ ಗಳು!

ಲಲಿತಾ

ಬಾಲಿವುಡ್ನಲ್ಲಿ ಮದುವೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಧಾನ್ಯತೆ ಮದುವೆಯಾಗದೆ ಒಟ್ಟಿಗೆ ಇರುವುದಕ್ಕೂ ಇದೆ. ಅನೇಕ ಜೋಡಿಗಳು ಮದುವೆಯಾಗದೇ ಒಟ್ಟಿಗೆ ಇದ್ದು ನಂತರ ಬೇರೆ ಆಗಿದ್ದೂ ಇದೆ. ಆದರೂ ಈ ಲಿವಿನ್ ಬಗ್ಗೆ  ಅಲ್ಲಿ ಪಾಪ್ಯೂಲಾರಿಟಿ ಇದ್ದೇ ಇದೆ. 

ಅಮೀರ್ ಖಾನ್ –ಕಿರಣ್ ರಾವ್

ಲಗಾನ್ ಶೂಟಿಂಗ್ ವೇಳೆ ಕಿರಣ್ ರಾವ್  ಮೇಲೆ ಅಮೀರ್ ಖಾನ್ ಗೆ ಪ್ಯಾರ್ ಆಗಿತ್ತು.   ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್  ಹಾಗೂ ಕಿರಣ್ ಅವರ ಗೆಳತನ  ಕ್ರಮೇಣ ಪ್ರೇಮಕ್ಕೆ  ತಿರುಗಿ ಅಮೀರ್ ಕಿರಣ್ ರ ಜೊತೆ ಒಂದೂವರೆ ವರ್ಷ  ಲಿವಿನ್ ರಿಲೇಷನ್ ಶಿಪ್ ನಲ್ಲಿ ಇದ್ದು  ನಂತರ ಮದುವೆಯಾದ ಸಂಗತಿ  ಅಮೀರ್  ಬಿಚ್ಚಿಟ್ಟಿದ್ದಾರೆ.

ಕುನಾಲ್ ಕೇಮು-ಸೋಹಾ ಅಲಿ ಖಾನ್

ಸೋಹಾ ಅಲಿ ಖಾನ್ ಕೂಡ ತನ್ನ ಅಣ್ಣನ ದಾರಿಯಲ್ಲೇ ಸಾಗಿದ್ದಾರೆ. ನಟ ಕುನಾಳ್ ಕೇಮು ಜೊತೆಗಿನ ಪ್ರಿತಿ- ಪ್ರೇಮಗಳ ಕುರಿತು ಸೋಹಾ ಎಂದೂ ಮುಚ್ಚಿಟ್ಟಿಲ್ಲ. ಅಷ್ಟೇ ಯಾಕೆ, ಒಬ್ಬ ವ್ಯಕ್ತಿಯ ಮೇಲೆ ನಂಬಿಕೆಯಿಟ್ಟು ಪ್ರೀತಿಸಿ ಆತನೊಂದಿಗೆ ಜೀವನ ನಡೆಸುವುದಕ್ಕೂ ಮದುವೆ ಆಗೋದಕ್ಕೂ ಏನೂ ವ್ಯತ್ಯಾಸವಿಲ್ಲ ಅನ್ನೋ ಮಾತು ಸೋಹಾದ್ದು.

ಸೈಫ್ ಅಲಿ ಖಾನ್ ಕರೀನಾ ಕಪೂರ್

 ಕಳೆದ 2012 ರ ಆಕ್ಟೋಬರ್ ನಲ್ಲಿ ಮದುವೆಯಾಗಿದ್ದ ಸೈಫ್-ಕರೀನಾ ಜೋಡಿಯೂ ಮದುವೆಗೆ ಮುನ್ನ ಲಿವಿನ್ ನಲ್ಲಿದ್ದರು . ಇದು ಸತ್ಯ ಅಂತ ಹೇಳಿದ್ದಾರೆ  ಕರೀನಾ ಕಪೂರ್ ಖಾನ್ . ಲಿವಿನ್ ಫಾರ್ಮುಲಾವನ್ನು ಖುದ್ದು ನಾನೂ ಟ್ರೈ ಮತ್ತು ಟೆಸ್ಟ್ ಮಾಡಿದ್ದೇನೆ. ಒಬ್ಬರನ್ನೊಬ್ಬರು ಅರಿಯಲು ಇದು ಹೆಚ್ಚು ಸಹಾಯಕಾರಿ ಅಂತಾರೆ ಬೇಬೋ !

ಬನ್ನೂರು ಕೆ. ರಾಜು
ಚಿತ್ರನಟಿ ಜಯಶ್ರೀ ಎಂದರೆ ಇಂದಿನವರಿಗೆ ಸುಲಭಕ್ಕೆ ಗೊತ್ತಾಗದು.  ಅವರ ಅಭಿನಯದ ಹಲವು ಚಿತ್ರಗಳನ್ನು ನೆನಪಿಸಿದಾಗ ಗೊತ್ತೆಂದು ಗೋಣುಕುಣಿಸುತ್ತಾರಷ್ಟೆ.  ನಟಿ ಜಯಶ್ರೀ ನಿಧನರಾದಾಗ ಈ ಸುದ್ದಿ ಕೇಳಿ ಅವರ ಸಹಕಲಾವಿದರನೇಕರು "ಓ ..... ಜಯಶ್ರೀ ಇನ್ನೂ ಬದುಕಿದ್ರಾ ......" ಎಂದು ಆಶ್ಚರ್ಯದಿಂದ ಉದ್ಘರಿಸಿದ್ದರಂತೆ.  ಅಷ್ಟರ ಮಟ್ಟಿಗೆ ಅವರು ಬದುಕಿದ್ದಾಗಲೇ ಎಲ್ಲರಿಂದಲೂ ದೂರವಾಗಿ ಮರೆಯಾಗಿದ್ದರು.  ಇದಕ್ಕೆ ಕಾರಣ ಪ್ರತಿಭಾವಂತ ಕಲಾವಿದರನ್ನು ನಡೆಸಿಕೊಳ್ಳುತ್ತಿರುವ ಇಂದಿನ ಚಿತ್ರೋದ್ಯಮದ ನಿರ್ಲಕ್ಷ್ಯ ಧೋರಣೆಯೇ ಆಗಿದೆ.  1995ರಲ್ಲಿ ಪದ್ಮಭೂಷಣ ಡಾ. ರಾಜ್‍ಕುಮಾರ್ ಅಧ್ಯಕ್ಷರಾಗಿದ್ದ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಜಯಶ್ರೀ ಅವರಿಗೊಂದು ಸನ್ಮಾನ ಸಮಾರಂಭ ಏರ್ಪಡಿಸಿತ್ತು.  ಅಲ್ಲಿ ಸನ್ಮಾನ ಸ್ವೀಕರಿಸಿದ ಇವರು ಅಂದೇ ಚಲನಚಿತ್ರರಂಗಕ್ಕೆ ಬೆನ್ನು ತಿರುಗಿಸಿ ವಿದಾಯ ಹೇಳಿದ್ದರು.  ಮತ್ತೆಂದೂ ಅವರು ಮುಖಕ್ಕೆ ಬಣ್ಣ ಹಚ್ಚಿದವರಲ್ಲ.  ಹಾಗೆಯೇ ಇದಕ್ಕಾಗಿ ಜಯಶ್ರೀ ಸಂಕಟಪಟ್ಟವರೂ ಅಲ್ಲ. ಆಶ್ರಮ ಸೇರಿದ ಅವರು ಅಲ್ಲಿಂದೀಚೆಗೆ ಇದ್ದೂ ಇಲ್ಲದಂತಾಗಿ ಅಜ್ಞಾತವಾಸಿಯಾಗಿ ಸನ್ಯಾಸ ಜೀವನದಲ್ಲಿ ಸಂತೃಪ್ತಿಯ ಬದುಕನ್ನು ನಡೆಸತೊಡಗಿದರು.  
ಮೂಲತಃ ಮೈಸೂರಿನವರಾದ ಜಯಶ್ರೀ ಹಾಸಿ ಹೊದಿಯುವಷ್ಟು ಬಡತನವೇ ತುಂಬಿದ್ದ ಕುಟುಂಬದಲ್ಲಿ ಜನಿಸಿದ ಹಿರಿಯ ಮಗಳು.  ಬೆನ್ನಿಗೊಬ್ಬ ತಮ್ಮನೂ ಇದ್ದ.  ಬಡ ತಂದೆ ತಾಯಿಗಳೊಡನೆ ಕಷ್ಟಪಟ್ಟು ಬಾಲ್ಯ ಸವೆಸುತ್ತಿರುವಾಗಲೇ ಮುಂದೊಂದು ದಿನ ತಾನು ನರ್ಸ್ ಆಗಿ ಬಡಬಗ್ಗರ, ದೀನದಲಿತರ ಸೇವೆ ಮಾಡಬೇಕೆಂಬ ಕನಸು ಜಯಶ್ರೀಯ ಎಳೆ ಕಂಗಳಲ್ಲಿ ಆಗಲೇ ಚಿಗುರಿತ್ತು.  ಹಾಗೆಯೇ ಈ ಹಾದಿಯಲ್ಲಿ ತಂದೆಯ ನೆರವಿನಿಂದ ಜಯಶ್ರೀ ಓದು ಮುಂದುವರಿಸಿದ್ದರು.  ಆದರೆ ಮನೆಯ ಆಧಾರಸ್ಥಂಭವಾಗಿದ್ದ ತಂದೆಯ ಆಕಸ್ಮಿಕ ಮರಣ ಜಯಶ್ರೀಗೆ ಬರಸಿಡಿಲಿನಂತೆ ಬಂದೆರಗಿತ್ತು.  ಇನ್ನು ಓದುವುದೆಲ್ಲಿಂದ ಬಂತು? ಇಡೀ ಕುಟುಂಬದ ಭಾರವನ್ನು ಜಯಶ್ರೀ ಹೊತ್ತರು.  ಇವರ ಕಷ್ಟದ ಪಾಡಿಗೆ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣವಾಯಿತು.  ಆದರೆ ಜಯಶ್ರೀ ಕಷ್ಟಕ್ಕೆ ಅಂಜಲಿಲ್ಲ.  ಬಂದದ್ದು ಬರಲಿ ನೋಡಿಯೇ ಬಿಡುತ್ತೇನೆಂಬ ಧೈರ್ಯದಿಂದ ಕಷ್ಟವನ್ನು ನೀಸಿಕೊಂಡೇ ಕೆಲವು ವರ್ಷಗಳು ತಳ್ಳಿದರು.  ಆದರೆ ಇನ್ನು ತನ್ನಿಂದ ಈ ಪರಿಯ ಕಷ್ಟಗಳನ್ನು ಸಹಿಸಲಿಕ್ಕೆ ಸಾಧ್ಯವಿಲ್ಲವೆನ್ನುವಷ್ಟು ದುಃಖ ಅವರಲ್ಲಿ ಮಡುಗಟ್ಟಿದ್ದಾಗ ಮುಳುಗುವವರಿಗೆ ಹುಲ್ಲುಕಡ್ಡಿ ಆಶ್ರಯ ಸಿಕ್ಕಂತೆ ತಮಿಳುನಾಡಿನ ಪಕ್ಷಿರಾಜ ಸ್ಟುಡಿಯೋದ ಮಾಲೀಕರ ಸಹೋದರಿ ದೇವಿ ಎಂಬ ಹೆಣ್ಣು ಮಗಳು ಸ್ನೇಹಿತೆಯಾಗಿ ಜಯಶ್ರೀಗೆ ಸಿಕ್ಕಿದಳು.  ಅದೇ ಇವರ ಮುಂದಿನ ಬದುಕಿಗೆ ದಾರಿದೀಪವಾಗಿತ್ತು.  ಯಾವುದೋ ಕಾಯಿಲೆಗೆ ಸಂಬಂಧಿಸಿದಂತೆ ಆಪರೇಷನ್ ಮಾಡಿಸಿಕೊಳ್ಳಲು ಮೈಸೂರಿಗೆ ಬಂದಿದ್ದ ದೇವಿಗೆ ಜಯಶ್ರೀಯ ಗುಣ ಬಹಳ ಹಿಡಿಸಿ ಅದು ಆತ್ಮೀಯ ಸ್ನೇಹಕ್ಕೆ ತಿರುಗಿತ್ತು.  ಹಾಗಾಗಿ ತನ್ನ ತಾಯಿ ಮತ್ತು ತಮ್ಮನನ್ನು ಸಾಕಲು ಜಯಶ್ರೀ ಪಡಬಾರದ ಪಾಡು ಪಡುತ್ತಿರುವುದನ್ನು ಕಣ್ಣಾರೆ ಕಂಡ ದೇವಿ ಒಂದು ದಿನ ಜಯಶ್ರೀ ಕುಟುಂಬವನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿಯೇಬಿಟ್ಟಳು!     
ನಟನೆ ಎಂದರೆ ಏನೆಂದೇ ಅರಿಯದ ಮುಗ್ಧೆ ಜಯಶ್ರೀ ಗೆಳತಿ ದೇವಿಯ ಧೈರ್ಯದಿಂದ ಮದ್ರಾಸಿನ ಪಕ್ಷಿರಾಜ ಸ್ಟುಡಿಯೋದಲ್ಲಿ ಮೊಟ್ಟಮೊದಲಿಗೆ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಲ್ಲುವಂತಾಯ್ತು.  ಹೀಗೆ ಜಯಶ್ರೀ ಅಭಿನಯಿಸಿದ ಪ್ರಥಮ ಚಿತ್ರ "ವಾಳವಿಲೊ ತಿರುನಾಳ್"  ಅಲ್ಲಿಂದ ಜಯಶ್ರೀ ಅವರ ಬಣ್ಣದ ಬದುಕು ಆರಂಭವಾಯ್ತು.  ಹಾಗೆಯೇ ಅವರ ಅದೃಷ್ಟದ ಬಾಗಿಲು ಸಹ ವಿಶಾಲವಾಗಿ ತೆರೆದುಕೊಂಡಿತು.  ಅವರ ಬದುಕಿನ ಬವಣೆಗಳೆಲ್ಲಾ ಒಂದೇ ಕ್ಷಣದಲ್ಲಿ ಮಾಯವಾಗಿಬಿಟ್ಟವು.  ಒಂದರ ಹಿಂದೆ ಒಂದು ಸಿನಿಮಾ ಅವಕಾಶಗಳು ಅವರತ್ತ ಬರತೊಡಗಿದವು.  ಅವರ ಅಭಿನಯದ ಚಿತ್ರಗಳು ಹೆಚ್ಚುತ್ತಾ ಹೋದಂತೆ ಜನಪ್ರಿಯತೆಯ ಪಟ್ಟ ತನ್ನಂತಾನೆ ಅವರಿಗೆ ಒಲಿಯಿತು.  
ಜಯಶ್ರೀ ತಮಿಳು ಚಿತ್ರಗಳಲ್ಲಿ ಜನಪ್ರಿಯತೆ ಗಳಿಸುತ್ತಿದ್ದಂತೆಯೇ ಇತ್ತ ಕನ್ನಡ ಚಿತ್ರರಂಗ ತಾರೆ ಜಯಶ್ರೀಯತ್ತ ದೃಷ್ಟಿಹರಿಸಿತು.  ಆಗ ಅಂದಿನ ಖ್ಯಾತನಟ ಹೊನ್ನಪ್ಪ ಭಾಗವತರು ತಾವು ನಾಯಕನಟರಾಗಿದ್ದ "ಭಕ್ತಕುಂಬಾರ" ಚಿತ್ರದ ನಾಯಕಿಯಾಗಿ 1942ರಲ್ಲಿ ಜಯಶ್ರೀ ಅವರನ್ನು ಮತ್ತೆ ಕನ್ನಡನಾಡಿಗೆ ಕರೆತಂದರು.  ಆನಂತರ ಅವರು ತನ್ನ ತವರು ನೆಲದಲ್ಲೇ ಅಭಿನಯವನ್ನು ಮುಂದುವರಿಸಿದರು.  
ಕನ್ನಡ ಚಿತ್ರರಂಗದ ಜಮಾನದಲ್ಲೇ ನಂಬರ್ ಒನ್ ತಾರೆಯಾಗಿ ಮೆರೆದ ಹಿರಿಮೆ ಅವರದು.  ಆರತಿ, ಭಾರತಿ, ಮಂಜುಳ, ಕಲ್ಪನಾ, ಚಂದ್ರಕಲಾ ....... ಇವರಾರೂ ಇನ್ನೂ ಸರಿಯಾಗಿ ಕಣ್ಬಿಟ್ಟಿರದ ಕಾಲದಲ್ಲೇ ಕನ್ನಡ ಚಿತ್ರಪ್ರೇಮಿಗಳ ಕನಸಿನ ತಾರೆಯಾಗಿ ಮಿನುಗಿ ಜಯಶ್ರೀ ಪ್ರಸಿದ್ಧಿಯ ಪರ್ವ ಕಂಡಿದ್ದರು.  1949ರಲ್ಲಿ ಬಿಡುಗಡೆಯಾದ ಇವರ "ನಾಗಕನ್ನಿಕಾ" ಚಿತ್ರವಂತೂ ಕನ್ನಡ ಚಿತ್ರಂಗದಲ್ಲೊಂದು ಹೊಸಕ್ರಾಂತಿಯನ್ನೇ ಮಾಡಿತ್ತು.  ಇಂದು ಖ್ಯಾತ ನಿರ್ದೇಶಕರಾಗಿರುವ ಎಸ್.ವಿ. ರಾಜೇಂದ್ರಸಿಂಗ್‍ಬಾಬು ಅವರ ತಂದೆ ಡಿ. ಶಂಕರ್‍ಸಿಂಗ್ ಅವರು ಮಹಾತ್ಮ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಪಕರೂ ಆಗಿ ಈ ಚಿತ್ರವನ್ನು ನಿರ್ದೇಶಿಸಿದ್ದರು.  ಜಯಶ್ರೀ ಅವರ ಮಾದಕ ಸೌಂದರ್ಯ ಮತ್ತು ಭಾವಪೂರ್ಣ ಅಭಿನಯದಿಂದ "ನಾಗಕನ್ನಿಕಾ" ಚಿತ್ರ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.  ನಿರ್ಮಾಪಕರಿಗಂತೂ ಹಣದ ಮಳೆಯನ್ನೇ ಸುರಿಸಿತ್ತು.  
 ನಂತರ ಕಲ್ಯಾಣ್‍ಕುಮಾರ್‍ಗೆ ನಾಯಕಿಯಾಗಿ "ಮುತ್ತೈದೆಭಾಗ್ಯ" ಚಿತ್ರದಲ್ಲಿ ಅಭಿನಯಿಸಿದ ಜಯಶ್ರೀ ಈ ಚಿತ್ರದ ಯಶಸ್ಸಿಗೂ ಬಹುಪಾಲು ಅವರೇ ಕಾರಣರಾಗಿದ್ದರು.  ನಟಿ ಜಯಶ್ರೀ ಇದ್ದರೆ ಸಾಕು ಚಿತ್ರಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ಮಾತು ನಲವತ್ತು, ಐವತ್ತರ ದಶಕದಲ್ಲಿ ಚಾಲ್ತಿಯಲ್ಲಿತ್ತು.  ಹೀಗೆ ಜಯದ ಮೆಟ್ಟಿಲುಗಳೊಡನೆ ಸಾಗಿಬಂದ ಜಯಶ್ರೀ ಕ್ರಮೇಣ ವಯೋಮಾನಕ್ಕೆ ತಕ್ಕ ಹಾಗೆ ಅಮ್ಮನ ಪಾತ್ರಕ್ಕೆ ಬಡ್ತಿ ಪಡೆದರು.  
ಮಂಗಳಗೌರಿ, ಮಿಸ್ ಲೀಲಾವತಿ, ಶಿವಶರಣೆ ನಂಬಿಯಕ್ಕ, ಅಮರಭಾರತಿ, ತಿಲೋತ್ತಮೆ, ಜಗನ್ಮೋಹಿನಿ, ಚಂದವಳ್ಳಿಯ ತೋಟ, ಶಿವಗಂಗೆ, ಜಗಜ್ಯೋತಿ ಬಸವೇಶ್ವರ, ನಾಗರಹಾವು, ಸಾವಿರಮೆಟ್ಟಿಲು...... ಸೇರಿದಂತೆ ಸುಮಾರು ಐನೂರು ಚಿತ್ರಗಳಲ್ಲಿ ಜಯಶ್ರೀ ಅಭಿನಯಿಸಿದ್ದರು!  ಇದರಲ್ಲಿ ಸುಮಾರು ಐವತ್ತು ಚಿತ್ರಗಳಲ್ಲಿ ವರನಟ ಡಾ. ರಾಜ್‍ಕುಮಾರ್ ಅವರಿಗೆ ಅಮ್ಮನಾಗಿ ಅವರು ನಟಿಸಿರುವುದೂ ಒಂದು ದಾಖಲೆ.  ವಿಪರ್ಯಾಸವೆಂದರೆ ಇಷ್ಟೊಂದು ಸಂಖ್ಯೆಯ ದಾಖಲಾರ್ಹ ಚಲನಚಿತ್ರಗಳಲ್ಲಿ ನಟಿಸಿರುವ ಅಭಿನೇತ್ರಿಗೆ "ಅಮರ ಭಾರತಿ" ಚಿತ್ರಕ್ಕೆ 1970ರಲ್ಲಿ ದೊರೆತ ಶ್ರೇಷ್ಠ ಪೋಷಕನಟಿ ರಾಜ್ಯ ಪ್ರಶಸ್ತಿಯನ್ನು ಹೊರತುಪಡಿಸಿದರೆ ಸರ್ಕಾರದಿಂದ ಅವರಿಗೆ ಯಾವುದೇ ರೀತಿಯ ಪ್ರಶಸ್ತಿ, ಪುರಸ್ಕಾರ, ಪ್ರೋತ್ಸಾಹ ಸಿಗಲಿಲ್ಲ. ಐನೂರು ಚಿತ್ರಗಳಲ್ಲಿ ನಟಿಸಿದ ಇಂತಹ ಮಹಾನ್‍ನಟಿ ತೆಗೆದುಕೊಂಡ ಅತ್ಯಂತ ಹೆಚ್ಚು ಸಂಭಾವನೆ ಎರಡು ಸಾವಿರ ರೂಪಾಯಿಗಳೆಂದರೆ ನಂಬುವುದೇ ಕಷ್ಟವಾಗುತ್ತದೆ, ಆದರಿದು ಸತ್ಯ.  ಹತ್ತು ಸಾವಿರ, ಇಪ್ಪತ್ತು ಸಾವಿರಕ್ಕೆ ಸಹಿ ಹಾಕಿಸಿಕೊಂಡು ಇವರಿಗೆ ಕೊಡುತ್ತಿದ್ದುದು ಒಂದೋ ಎರಡೋ ಸಾವಿರವೆಂದಾಗ ಎಂತಹವರಿಗಾದರೂ ಹೊಟ್ಟೆ ಉರಿಯದಿದ್ದೀತೆ? ಅದಕ್ಕೇ ಒಮ್ಮೆ ಅವರು ಈ ಸರ್ಕಾರ, ಈ ಕನ್ನಡ ಚಿತ್ರೋದ್ಯಮ ನನಗೇನ್ ಮಾಡಿದೆ......? ನನಗಿಂತ ಕಿರಿಯರಿಗೆಲ್ಲಾ ಇಲ್ಲಿ ಸ್ಥಾನ, ಮಾನ, ಪ್ರಶಸ್ತಿ, ಪುರಸ್ಕಾರ, ಬಹುಮಾನ ಎಲ್ಲವೂ ದೊರೆಯಿತು.  ಆದರೆ ನನ್ನನ್ನು ಮಾತ್ರ ಈ ಎಲ್ಲದರಿಂದಲೂ ವಂಚಿಸಲಾಯಿತು.  ಏಕೆ? ಕನ್ನಡ ಚಿತ್ರರಂಗಕ್ಕೆ ನನ್ನನ್ನೇ ನಾನು ಅರ್ಪಿಸಿಕೊಂಡದ್ದೇ ತಪ್ಪಾಯಿತೇ ಎಂದು ನೊಂದು ಪ್ರಶ್ನಿಸಿದ್ದರು.
ನಟಿ ಜಯಶ್ರೀ ಅವರು ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗಲೇ ಭಾಸ್ಕರ್ ಎಂಬ ಬಿಸಿನೆಸ್‍ಮೆನ್‍ನನ್ನು ವಿವಾಹವಾಗಿದ್ದರು.  ಅವರಿಗೆ ಲಕ್ಷ್ಮೀಪತಿ ಎಂಬ ಎರಡು ವರ್ಷದ ಮಗನಿದ್ದಾಗ ವ್ಯಾಪಾರಕ್ಕೆಂದು ಆತ ಶ್ರೀಲಂಕಾಕ್ಕೆ ಹೋದ. ಅಲ್ಲಿಗೇ ಬಂದುಬಿಡುವಂತೆ ಜಯಶ್ರೀ ಅವರನ್ನು ಒತ್ತಾಯಿಸಿದ.  ಆದರೆ ಅವರಿಗೆ ಹೆತ್ತಮ್ಮ, ಒಡಹುಟ್ಟಿದ ತಮ್ಮ ಎಲ್ಲರನ್ನೂ ಬಿಟ್ಟು ಜೊತೆಗೆ ದೇಶವನ್ನೂ ಬಿಟ್ಟು ಅಲ್ಲಿಗೆ ಹೋಗುವ ಮನಸ್ಸಾಗಲಿಲ್ಲ.  ಆತನೂ ಮತ್ತೆ ಇಲ್ಲಿಗೆ ಬರುವ ಮನಸ್ಸು ಮಾಡಲಿಲ್ಲ.  ಕಾಲ ಉರುಳುತ್ತಲೇ ಹೋಯಿತು.  ಹೀಗೆ ವೈವಾಹಿಕ ಬದುಕಿನ ಸಂಕಟವನ್ನು ಒಡಲಲ್ಲಿಟ್ಟುಕೊಂಡು, ಸಾರ್ವತ್ರಿಕ ಜೀವನದ ಬಣ್ಣದ ಬದುಕಿನ ನೋವನ್ನು ಮಡಿಲಲ್ಲಿ ತುಂಬಿಕೊಂಡು ಸೀದಾ ಆಶ್ರಮದತ್ತ ಹೆಜ್ಜೆ ಇಟ್ಟವರು ಜಯಶ್ರೀ.  ಪ್ರಶಾಂತಿ ಶಾಂತಿಧಾಮದಲ್ಲಿ ಒಂದಷ್ಟು ವರ್ಷಗಳು, ಜಿಗಣಿ ಆಶ್ರಮದಲ್ಲಿ ಕೆಲವು ವರ್ಷಗಳು ಹೀಗೆ ಹಲವಾರು ಆಶ್ರಮವಾಸಿಯಾಗಿ ದೀನದಲಿತರ, ನಿರ್ಗತಿಕ ಬಡಬಗ್ಗರ ಸೇವೆ ಮಾಡುತ್ತಾ ಅಜ್ಞಾತರಾಗಿಯೇ ಅವರು ಬದುಕು ಕಳೆಯತೊಡಗಿದರು.  ಪ್ರಶಾಂತಿ ಶಾಂತಿಧಾಮದಲ್ಲಿದ್ದಾಗ ಒಮ್ಮೆ ಮಾಜಿ ಮುಖ್ಯಮಂತ್ರಿ ವೀರೇಂದ್ರಪಾಟೀಲರು ಇವರನ್ನು ಕಂಡು ಕಷ್ಟ-ಸುಖ ವಿಚಾರಿಸಿಕೊಂಡಿದ್ದರಂತೆ.  ಆದರೆ ಯಾವ ನೋವುಗಳನ್ನೂ ಅವರಿಗೆ ಇವರು ಹೇಳಿಕೊಳ್ಳದೆ ನಾನು ಪ್ರೀತಿಯಿಂದ ಇಷ್ಟಪಟ್ಟು ಇಲ್ಲಿದ್ದೇನೆ.  ಜನಸೇವೆ ಮಾಡುವ ಉದ್ದೇಶ ತನ್ನದೆಂದು ಹೇಳಿದ್ದರಂತೆ.  ಆಶ್ಚರ್ಯವೆಂದರೆ ಅವರ ಸೇವೆಗಾಗಿ ಆಶ್ರಮದವರು ಪ್ರತಿತಿಂಗಳು ಇಂತಿಷ್ಟು ಹಣವನ್ನು ಕೊಡಲು ಮುಂದೆ ಬಂದಾಗ ಅದನ್ನು ತೆಗೆದುಕೊಳ್ಳದೆ ನಿರಾಕರಿಸಿದರಂತೆ. 
ತಮ್ಮ ಬದುಕಿನ ಕಡೆಯ ದಿನಗಳಲ್ಲಿ ಬೆಂಗಳೂರನ್ನು ಬಿಟ್ಟು ಹುಟ್ಟೂರು ಮೈಸೂರಿಗೆ ಬಂದಿದ್ದ ಜಯಶ್ರೀ ಅವರು ಸಚ್ಚಿದಾನಂದ ಆಶ್ರಮಕ್ಕೆ ಸೇರಿಕೊಂಡು ತಮ್ಮ ಸೇವೆಯನ್ನು ಮುಂದುವರಿಸಿದ್ದರು.  ಅವರ ಪ್ರಾಣಪಕ್ಷಿ ಕೂಡ ಇಲ್ಲಿಯೇ ಹಾರಿಹೋಗಬೇಕೆಂಬ ವಿಧಿಲಿಖಿತವಿತ್ತೆಂದು ಕಾಣುತ್ತದೆ.  2006ರ ಅಕ್ಟೋಬರ್ 29ರ ಮುಂಜಾನೆ 8 ಗಂಟೆಯಲ್ಲಿ ಆಶ್ರಮದ ಕೊಠಡಿಯಲ್ಲಿ ತಿಂಡಿತಿನ್ನುತ್ತಾ ಕುಳಿತಿದ್ದ ಹೃದಯವಂತೆ ಕಲಾವಿದೆಯ ಹೃದಯ ಬಡಿತ ಥಟ್ಟನೆ ನಿಂತುಹೋಗಿತ್ತು. ಬೆಂಗಳೂರಿನಲ್ಲೇ ಅವರ ಅಂತ್ಯಕ್ರಿಯೆ ನಡೆದರೂ ಕೂಡ ಆಗ ಬಂದಿದ್ದವರು ಕೆಲವೇ ಕೆಲವು ಮಂದಿ ಮಾತ್ರ! 

ಮಹಾನ್ ಅಭಿನಯತ್ರಿ ಜಯಶ್ರೀ

ಬನ್ನೂರು ಕೆ. ರಾಜು

ಚಿತ್ರನಟಿ ಜಯಶ್ರೀ ಎಂದರೆ ಇಂದಿನವರಿಗೆ ಸುಲಭಕ್ಕೆ ಗೊತ್ತಾಗದು.  ಅವರ ಅಭಿನಯದ ಹಲವು ಚಿತ್ರಗಳನ್ನು ನೆನಪಿಸಿದಾಗ ಗೊತ್ತೆಂದು ಗೋಣುಕುಣಿಸುತ್ತಾರಷ್ಟೆ.  ನಟಿ ಜಯಶ್ರೀ ನಿಧನರಾದಾಗ ಈ ಸುದ್ದಿ ಕೇಳಿ ಅವರ ಸಹಕಲಾವಿದರನೇಕರು "ಓ ..... ಜಯಶ್ರೀ ಇನ್ನೂ ಬದುಕಿದ್ರಾ ......" ಎಂದು ಆಶ್ಚರ್ಯದಿಂದ ಉದ್ಘರಿಸಿದ್ದರಂತೆ.  ಅಷ್ಟರ ಮಟ್ಟಿಗೆ ಅವರು ಬದುಕಿದ್ದಾಗಲೇ ಎಲ್ಲರಿಂದಲೂ ದೂರವಾಗಿ ಮರೆಯಾಗಿದ್ದರು.  ಇದಕ್ಕೆ ಕಾರಣ ಪ್ರತಿಭಾವಂತ ಕಲಾವಿದರನ್ನು ನಡೆಸಿಕೊಳ್ಳುತ್ತಿರುವ ಇಂದಿನ ಚಿತ್ರೋದ್ಯಮದ ನಿರ್ಲಕ್ಷ್ಯ ಧೋರಣೆಯೇ ಆಗಿದೆ.  1995ರಲ್ಲಿ ಪದ್ಮಭೂಷಣ ಡಾ. ರಾಜ್‍ಕುಮಾರ್ ಅಧ್ಯಕ್ಷರಾಗಿದ್ದ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಜಯಶ್ರೀ ಅವರಿಗೊಂದು ಸನ್ಮಾನ ಸಮಾರಂಭ ಏರ್ಪಡಿಸಿತ್ತು.  ಅಲ್ಲಿ ಸನ್ಮಾನ ಸ್ವೀಕರಿಸಿದ ಇವರು ಅಂದೇ ಚಲನಚಿತ್ರರಂಗಕ್ಕೆ ಬೆನ್ನು ತಿರುಗಿಸಿ ವಿದಾಯ ಹೇಳಿದ್ದರು.  ಮತ್ತೆಂದೂ ಅವರು ಮುಖಕ್ಕೆ ಬಣ್ಣ ಹಚ್ಚಿದವರಲ್ಲ.  ಹಾಗೆಯೇ ಇದಕ್ಕಾಗಿ ಜಯಶ್ರೀ ಸಂಕಟಪಟ್ಟವರೂ ಅಲ್ಲ. ಆಶ್ರಮ ಸೇರಿದ ಅವರು ಅಲ್ಲಿಂದೀಚೆಗೆ ಇದ್ದೂ ಇಲ್ಲದಂತಾಗಿ ಅಜ್ಞಾತವಾಸಿಯಾಗಿ ಸನ್ಯಾಸ ಜೀವನದಲ್ಲಿ ಸಂತೃಪ್ತಿಯ ಬದುಕನ್ನು ನಡೆಸತೊಡಗಿದರು.  ಮೂಲತಃ ಮೈಸೂರಿನವರಾದ ಜಯಶ್ರೀ ಹಾಸಿ ಹೊದಿಯುವಷ್ಟು ಬಡತನವೇ ತುಂಬಿದ್ದ ಕುಟುಂಬದಲ್ಲಿ ಜನಿಸಿದ ಹಿರಿಯ ಮಗಳು.  ಬೆನ್ನಿಗೊಬ್ಬ ತಮ್ಮನೂ ಇದ್ದ.  ಬಡ ತಂದೆ ತಾಯಿಗಳೊಡನೆ ಕಷ್ಟಪಟ್ಟು ಬಾಲ್ಯ ಸವೆಸುತ್ತಿರುವಾಗಲೇ ಮುಂದೊಂದು ದಿನ ತಾನು ನರ್ಸ್ ಆಗಿ ಬಡಬಗ್ಗರ, ದೀನದಲಿತರ ಸೇವೆ ಮಾಡಬೇಕೆಂಬ ಕನಸು ಜಯಶ್ರೀಯ ಎಳೆ ಕಂಗಳಲ್ಲಿ ಆಗಲೇ ಚಿಗುರಿತ್ತು.  ಹಾಗೆಯೇ ಈ ಹಾದಿಯಲ್ಲಿ ತಂದೆಯ ನೆರವಿನಿಂದ ಜಯಶ್ರೀ ಓದು ಮುಂದುವರಿಸಿದ್ದರು.  ಆದರೆ ಮನೆಯ ಆಧಾರಸ್ಥಂಭವಾಗಿದ್ದ ತಂದೆಯ ಆಕಸ್ಮಿಕ ಮರಣ ಜಯಶ್ರೀಗೆ ಬರಸಿಡಿಲಿನಂತೆ ಬಂದೆರಗಿತ್ತು.  ಇನ್ನು ಓದುವುದೆಲ್ಲಿಂದ ಬಂತು? ಇಡೀ ಕುಟುಂಬದ ಭಾರವನ್ನು ಜಯಶ್ರೀ ಹೊತ್ತರು.  ಇವರ ಕಷ್ಟದ ಪಾಡಿಗೆ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣವಾಯಿತು.  ಆದರೆ ಜಯಶ್ರೀ ಕಷ್ಟಕ್ಕೆ ಅಂಜಲಿಲ್ಲ.  ಬಂದದ್ದು ಬರಲಿ ನೋಡಿಯೇ ಬಿಡುತ್ತೇನೆಂಬ ಧೈರ್ಯದಿಂದ ಕಷ್ಟವನ್ನು ನೀಸಿಕೊಂಡೇ ಕೆಲವು ವರ್ಷಗಳು ತಳ್ಳಿದರು.  ಆದರೆ ಇನ್ನು ತನ್ನಿಂದ ಈ ಪರಿಯ ಕಷ್ಟಗಳನ್ನು ಸಹಿಸಲಿಕ್ಕೆ ಸಾಧ್ಯವಿಲ್ಲವೆನ್ನುವಷ್ಟು ದುಃಖ ಅವರಲ್ಲಿ ಮಡುಗಟ್ಟಿದ್ದಾಗ ಮುಳುಗುವವರಿಗೆ ಹುಲ್ಲುಕಡ್ಡಿ ಆಶ್ರಯ ಸಿಕ್ಕಂತೆ ತಮಿಳುನಾಡಿನ ಪಕ್ಷಿರಾಜ ಸ್ಟುಡಿಯೋದ ಮಾಲೀಕರ ಸಹೋದರಿ ದೇವಿ ಎಂಬ ಹೆಣ್ಣು ಮಗಳು ಸ್ನೇಹಿತೆಯಾಗಿ ಜಯಶ್ರೀಗೆ ಸಿಕ್ಕಿದಳು.  ಅದೇ ಇವರ ಮುಂದಿನ ಬದುಕಿಗೆ ದಾರಿದೀಪವಾಗಿತ್ತು.  ಯಾವುದೋ ಕಾಯಿಲೆಗೆ ಸಂಬಂಧಿಸಿದಂತೆ ಆಪರೇಷನ್ ಮಾಡಿಸಿಕೊಳ್ಳಲು ಮೈಸೂರಿಗೆ ಬಂದಿದ್ದ ದೇವಿಗೆ ಜಯಶ್ರೀಯ ಗುಣ ಬಹಳ ಹಿಡಿಸಿ ಅದು ಆತ್ಮೀಯ ಸ್ನೇಹಕ್ಕೆ ತಿರುಗಿತ್ತು.  ಹಾಗಾಗಿ ತನ್ನ ತಾಯಿ ಮತ್ತು ತಮ್ಮನನ್ನು ಸಾಕಲು ಜಯಶ್ರೀ ಪಡಬಾರದ ಪಾಡು ಪಡುತ್ತಿರುವುದನ್ನು ಕಣ್ಣಾರೆ ಕಂಡ ದೇವಿ ಒಂದು ದಿನ ಜಯಶ್ರೀ ಕುಟುಂಬವನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿಯೇಬಿಟ್ಟಳು!     